Thursday, January 5, 2012

ಗಂಡ ಅಂದರೆ ? ಹೆಂಡತೀರು ಏನೇನು ಬೈಕೋಬಹುದು. ಹಳೇ 386 ಕಂಪ್ಯೂಟರ್ ವಿಥ್ DOS ೧.೦ . ತುಂಬಾ ಸ್ಲೋ ಹಳೇ ಮಾಡಲ್. ಮೆಮೊರಿ ಸಲಾದು (ಅಂದ್ರೆ ವಿಟಮಿನ್ M, ದುಡ್ಡು ). ನೋ ಹಾರ್ಡ್ಡಿಸ್ಕ್ ಸ್ಪೇಸ್, ನಾನು ಹೇಳೋದು ಏನು ನೆನಪಿನಲ್ಲಿ ಇರೋಲ್ಲ. ಯಾವಾಗಲು, ಔಟ್ ಆಫ್ ಮೆಮೊರಿ ಎರ್ರರ್. ಮೂರೂ ಹೊತ್ತು ದುಡ್ಡಿಲ್ಲ ದುಡ್ಡಿಲ್ಲ ಅಂತ ಗೊಣಗ್ತಾ ಇರುತ್ತೆ. ಆಪ್ ಗ್ರೇಡ್ ಮಾಡೋಕೆ ಆಗೊಲ್ಲ. ತುಂಬಾ ಹಳೇ ಮದರ್ ಬೋರ್ಡ್. ಎಸೆಯೋಣ ಅಂದ್ರೆ ಮನಸ್ಸು ಇಲ್ಲ. ನಮಪ್ಪ ಅವನ ತರಹದ್ದೇ ೧೯೪೨ ಮದೆಲ್, ಬಿಟ್ಟಿ ಸಿಗ್ತು ಅಂತ ಕಟ್ಟು ಬಿಟ್ಟಿದಾನೆ.
ಪ್ರಿಯತೆಮೆ Development stage ನಲ್ಲಿರುವ ಪ್ರೊಗ್ರಾಮ್ ತರಹ. ಹೇಗೆ ಬೇಕಾದರೂ ತಿದ್ದಿ ಬರೆಯಬಹುದು. ಆದರೆ requirement ಗೊತ್ತಿರೋಲ್ಲ. ಅಥವಾ, ವಯಸ್ಸಿನ ಗಮ್ಮತ್ತು ಹಾಗಿರುತ್ತೆ. requirement ಅರ್ಥವೇ ಆಗಿರೋಲ್ಲ ನಮಗೆ.
ಹೆಂಡತಿ, ರಿಲೀಸ್ ಆಗಿರೋ ಅಪ್ಲಿಕೇಶನ್ ತರಹ. requirement ಆಗ ಗೊತ್ತಾಗಿರುತ್ತೆ. ಆದರೆ production ನಲ್ಲಿರೋ ಅಪ್ಲಿಕೇಶನ್ ಫಿಕ್ಸ್ ಮಾಡೋಕೆ ಆಗೋಲ್ಲ. ಬರೀ ಸಪೋರ್ಟ್ ಮಾತ್ರ ಮಾಡಬೇಕು. ಅದೂ ಜೀವನ ಪರ್ಯಂತ ಸಪೋರ್ಟ್ ಮಾಡಬೇಕು ಬಾರತದಲ್ಲಿ. ಇನ್ನಾ ಕಷ್ಟಾ. ಹೆಂಡತಿ ಅನ್ನೋ ಅಪ್ಲಿಕೇಶನ್ ಸಿಗೋದು ಎಲ್ಲರಿಗು ಒಂದೇ version ೧.೦. ನೋ ರಿಲೀಸ್ , ನೋ patch.
ನನ್ನ ಹೆಂಡತಿಗಿಂತ ನಾನು ಬರೆವ ಸಾಫ್ಟ್ವೇರ್ ನನಗೆ ಹೆಚ್ಚು ಇಷ್ಟ ಕಾರಣ ಅವು ಎಂದೆಂದಿಗೂ ನಾನು ಹೇಳಿದಂತೆ ಕೇಳುತ್ತವೆ. ಕೇಳದಿದ್ದರೆ ಅವನ್ನು ಮತ್ತೆ ತಿದ್ದಿ ಬರೆದು ಬಿಡಬಹುದು I ಕ್ಯಾನ್ ಫಿಕ್ಸ್ them .
ಅವುಗಳನ್ನು ಹತೋಟಿಗೆ ತರಬಲ್ಲೆನೆಂಬ ಆತ್ಮ ವಿಶ್ವಾಸವಿದೆ.
ಆದರೆ ಹೆಂಡತಿ ? ವೈರಸ್ ಹಿಡಿದ ಕಂಪ್ಯೂಟರ್ ನಂತೆ. ಯಾವಾಗ ಹೇಗೆ ವರ್ಕ್ ಅಗುತ್ತೆ ಹೇಳೋಕಾಗೋಲ್ಲ.

Wednesday, January 13, 2010

ಕನಸಿನಲ್ಲೂ ಕೈ ಕೊಡಬೇಡ ಗೆಳತಿ ಆ ನೋವ ಕನಸಿನಾಚೆಗೂ ನ ಸಹಿಸಲಾರೆ ಯೇಕೆ೦ದರೆ ಕನಸಿನಲ್ಲಿ ನಾ ಕುಡಿವ ವಿಷದಿಂದ ನಾ ಸಾಯಲಾರೆ. ಕನಸಿನ ತಿಂಗಳ ಪಾಸ್ ಉಂಟೆ?? ಯೇಕೆ೦ದರೆ ದಿನವೂ ಅವಳು ನನ್ನ ಕನಸಿನಲ್ಲಿ ವಿಹರಿಸುತಾಳೆ. ಕೈ ಹಿಡಿದು ಚಂದಿರನ ವರೆಗೂ ಜೊತೆಬರುವ ನೀನು. ಕನಸಿನ್ನಲ್ಲೂ ನಿಮ್ಮ ಮನೆಯ ತಿರುವಿನಲ್ಲಿ ಕೈಬಿಡು ಯೆನ್ನುವೆಯಲ್ಲ ನೀನು.ನಲ್ಲೇ ಕನಸಿನಲ್ಲಿ ಮಾಡಿದ ತಪ್ಪಿಗೆ ಕನಸಿನಾಚೆ ಕಟಕಟೆಯಲ್ಲಿ ನಿಲ್ಲಿಸುವುದಿಲ್ಲ ತಾನೇ ? ಅಬ್ಬಾ ಬದುಕಿದೆಮೊನ್ನೆ ನಿನ್ನ ಅಪ್ಪನ ಗಾಡಿಯ ಹವಾ ತೆಗೆದಿದ್ದೆ ಕನಸಿನಲ್ಲಿ.

www.somariprashanthana.bolgspot.com

Sunday, November 22, 2009

ವರ ಬೇಕಾಗಿದ್ದಾರೆ

ನಮ್ಮ ಪರಿಚಯದವರೊಬ್ಬರು ವರ ಹುಡುಕುತ್ತಿದ್ದಾರೆ. ವರನಿಗಿರಬೇಕಾದ ಲಕ್ಷಣಗಳ ಪಟ್ಟಿ ಹೀಗಿದೆ.
ತಮಿಳನೂ ಅಲ್ಲದ, ಕನ್ನಡಿಗನೂ ಅಲ್ಲದ, ಪೂರ್ವೀಕರು ತಮಿಳುನಾಡಿನಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವಂತಹ, ತಮಿಳು ಮರೆತಿರುವ, ಕನ್ನಡ ಕಲಿಯದ, ತಮಿಳ್ಗನ್ನಡ ಮಾತಾಡುವ, ಬೆಳ್ಳಗೆ, ತೆಳ್ಳಗಿರುವ, ದಪ್ಪ ಹುಡಿಗಿಯನ್ನು ಒಪ್ಪಿ ಕೊಳ್ಳುವಂತಹ, ಮೀಸೆ ಬಿಟ್ಟಿರುವ, ಹೆಂಡತಿಗೆ ಬೇಕೆನಿಸಿದಾಗ ಮೀಸೆ ಬೋಡಿಸಿಕೊಳ್ಳಬಲ್ಲ, ಈರುಳ್ಳೀ, ಬೆಳ್ಳುಳ್ಳಿ ತಿನ್ನದ, ಅದರ ವಾಸನೆಯನ್ನೂ ಸಹಿಸದೆ, ಹೊರಗಡೆ ಹೆಂಡತಿಗೆ, ಆಕೆಯ ಅಭಿರುಚಿಗೆ ತಕ್ಕಂತೆ ಪಾನಿಪೂರಿ, ಮಸಾಲಪೂರಿ ಕೊಡಿಸಬಲ್ಲ, ಮನೆಯಲ್ಲಿ ಪಂಚೆ ಉಟ್ಟುಕೊಳ್ಳುವ. ಶಾಪಿಂಗಿಗೆ ಜೀನ್ಸ್ ಹಾಕಿಕೊಳ್ಳುವ, ಸಂಸ್ಕೃತ, ವೇದಗಳ ಪಾಂಡಿತ್ಯ ಹೊಂದಿರುವ, ಭಾರಿ ಸಂಬಳ ತರುವ, ಸಾಫ಼್ಟ್ ವೇರ್ ಇಂಜಿನೀಯರ್ ವರ ಬೇಕಾಗಿದ್ದಾರೆ. ವೈದೀಕ ಕುಟುಂಬದಿಂದ ಬಂದಿರುವ, ವೈದೀಕ ಸಂಪ್ರದಾಯ ಪಾಲಿಸುವ, ಸಂದ್ಯಾವಂದನೆ ಮಾಡುವ, ತರ್ಪಣ ಬಿಡುವ, ಹೆಂಡತಿ ಬಯಸಿದಾಗ ಕ್ಷಾಣಾರ್ದದಲ್ಲಿ ಮಾರ್ಡನ್ ಆಗಬಲ್ಲ, ಬೆಂಗಳೂರಿನಲ್ಲಿ ನೆಲೆಸಿರುವ, ಆಗಾಗ ಹೆಂಡತಿಯನ್ನು ವಿದೇಶಕ್ಕೆ ಕರೆದೊಯ್ಯಬಲ್ಲ, ಶ್ರೀಮಂತ, ನಿರಹಂಕಾರಿ, ಅಪ್ಪ, ಅಮ್ಮ ಇಲ್ಲದ(ಉದ್ಬವ ಮೂರ್ತಿ), ಅಣ್ಣ, ತಂಗಿ, ಅತ್ತಿಗೆಯಿಲ್ಲದ, ಪಿತ್ರಾರ್ಜಿತ ಆಸ್ತಿ ಹೊಂದಿರುವ ವರ ಬೇಕಾಗಿದ್ದಾನೆ. ಆಫ಼ೀಸ್ನಲ್ಲಿ ದುಡಿದು, ಮನೆಯಲ್ಲಿ ವೈದೀಕ ಕರ್ಮಾಚರಣೆ ನಡೆಸುತ್ತಾ, ಹೆಂಡತಿಗೆ ಗೃಹ ಕೃತ್ಯ ಕಾರ್ಯಗಳಲ್ಲಿ ನೆರವಾಗಬಲ್ಲ ವರ ಬೇಕಾಗಿದ್ದಾನೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ.
ಹೆಂಡತಿಯೊಬ್ಭಳು ಶಾಪಿಂಗಿಗೆ ನಡೆದರೆ ಸಾಲದು ಕೋಟಿ ರುಪಾಯಿ.

ಕರೆಂಟು ಹೋದರೆ ಮನೆಯೋಳಗಿರಲಾರೆ, ಬೇಕೆಂದಳು ಉಪಿಎಸ್ಸು.
ಹೆಂಡತಿ ತವರಿಗೆ ಹೊರಡುವೆನೆಂದರೆ ಹತ್ತಿಸುವೆನು ಬಸ್ಸು.

ಕೈ ಹಿಡಿದವಳು ಮಾಡಿದ ಅಡುಗೆಯು ಅವಳಿಗೆ ಅದೆ ಚೆಂದ.
ಹೆಂಡತಿ ಮಾಡಿದ ಅಡುಗೆಯ ಹೊಗಳಲು ಸಂಸಾರವೆ ಆನಂದ.

ಸರ್ವಜ್ಣನ ವಚನವು ನಿಜವಾಗುವುದಿದ್ದರೆ ಕನಸೇ ಇರಬೇಕು.
ಮೆಚ್ಚಿ ನಡೆವ ಸತಿ ಸಿಗಬೇಕಿದ್ದರೆ ತ್ರೇತಾಯುಗವೇ ಬರಬೇಕು.

ಹೆಂಡತಿಯೊಂದಿಗೆ ಬಡತನ ಸಿರಿತನ ಏನೂ ತಿಳಿಯೊಲ್ಲ.
ಬಡತನವಾದರು ಸಿರಿತನವಾದರು ಅವಳದೆ ಎನದೆಲ್ಲ.

ಹೆಂಡತಿಯಾಸೆಯ ಅರಿಯದ ಗಂಡಿಗೆ ಬಾಳಲಿ ಸುಖವಿಲ್ಲ.
ಹೆಂಡತಿಯೊಲುಮೆಯ ಗಳಿಸದ ಗಂಡಿಗೆ ಬದುಕಿಲ್ಲ.

Saturday, November 21, 2009

ಮೊಬೈಲ್.. ಮೊಬೈಲ್

ನಾಗವಾರ ಸಿಗ್ನಲ್‍ನಲ್ಲಿ ಕಾರು  ನಿಲ್ಲಿಸಿ ಹಸಿರು ದೀಪಕ್ಕಾಗಿ ಕಾಯುತ್ತಿದ್ದೆ. ಹಲವಾರು ರೀತಿ ಬಿಕ್ಷೆಬೇಡುವವರು ಈ ಸಿಗ್ನಲ್‍ನಲ್ಲಿ ಕಾಣಸಿಗುತ್ತಾರೆ. ನಪುಂಸಕಲಿಂಗೀಯರು ಹಿಂದಿನ ಜನ್ಮದ ಸಾಲ ವಸೂಲಿಮಾಡುವವರಂತೆ ಧೋರಣೆಯಿಂದೆ ಬಿಕ್ಷೆ ಬೇಡಿದರೆ, ಇನ್ನು ಕೆಲವರು ಹಸಿಗೂಸನ್ನು ಬಿಸಿಲಿನಲ್ಲಿ ಓಣಗಿಸುತ್ತಾ ಕೂಸಿನ ಹೆಸರಿನಲ್ಲಿ ದೈನ್ಯತೆಯಿಂದ ಬಿಕ್ಷೆಬೇಡುತ್ತಾರೆ. ಕಿಟಕಿಯಿಂದಾಚೆ ಒಬ್ಬಾಕೆ ಮೊಬೈಲ್ ಹಿಡಿದು ಏನೋ ಕೇಳುತ್ತಿದ್ದಳು. ಕಿಟಕಿ ಗಾಜು ಇಳಿಸಿ ಏನೆಂದು ವಿಚಾರಿಸಿದೆ.

ಅಪ್ಪಾ, ಅಣ್ಣಾ, ೩ ತಿಂಗಳಿನಿಂದ ಮೊಬೈಲ್ ರಿಚಾರ್ಜ್ ಮಾಡಿಸಿಲ್ಲ. ಇನ್‍ಕಮಿಂಗ್ ಕೂಡ ಕಟ್ಮಾಡರೆ. ರೀಚಾರ್ಜ ಮಾಡಾಕೆ ದಾನ ಮಾಡಿ ಪುಣ್ಯ ಕಟ್ಟುಕೊಳ್ಳಿ ಅಣ್ಣಾ. ನಿಮಗೆ ಆ ದೇವರು ಆಪಲ್ ಐಫೋನ್ ಸಿಗೊಹಾಗೆ ಮಾಡ್ತಾನೆ ಅಯ್ಯಾ” ಎಂದು ದೈನ್ಯದಿಂದ ಬೇಡಿದಳು. ನನಗೂ ಆಕೆಯನ್ನು ನೋಡಿ ಮರುಕಹುಟ್ಟಿತು. ಊಟವಿಲ್ಲದಿದ್ದರೂ ಪರವಗಿಲ್ಲ. ಮೂರು ತಿಂಗಳಿನಿಂದ ಮೊಬೈಲ್ ಇಲ್ಲದೆ ಹೇಗೆ ಜೀವನ ಸಾಗಿಸುತ್ತಿದ್ದಾಳೆ ಎನಿಸಿತು. ಆಕೆಗೆ ಐದು ರೂಪಾಯಿ ಕೋಡಲು ಹೋದೆ. ಅವಳಿಗೆ ಇನ್ನೋಬ್ಬ ಬಿಕ್ಷುಕ ಫೋನ್ ಮಾಡಿದ್ದ. ಇವಳು “ಏನು ಇವತ್ತಿಂದ ಬ್ಯಾಂಗಳೂರ್ ಐಟಿ.ಕಾಮ್ ಶುರು ಆಗಿದೆಯಾ? ಹಂಗಾದ್ರೆ ಭಾರಿ ಬಿಕ್ಷೆನೆ ಸಿಕ್ಕೀತು” ಎಂದು ನಾನು ಕೊಡಲು ಹೋದ ಐದು ರೂಪಾಯಿಯನ್ನು ತೆಗೆದುಕೊಳ್ಳದೆ ಹೊಗಿಯೇಬಿಟ್ಟಳು.

ನಾಲ್ಕು ಮೊಬೈಲ್ ಏಕೆ?.

ನನ್ನ ಸ್ನೇಹಿತನೊಬ್ಭ ನಾಲ್ಕು ಮೊಬೈಲ್ ಹಿಡಿದು ತಿರಿಗುತ್ತಿದ್ದ. ನಾಲ್ಕು ಮೊಬೈಲ್ ಏಕೆ ಬೇಕೆಂದು ವಿಚಾರಿಸಿದೆ. ತನ್ನ ಹೆಂಡತಿಯದು ಏರ್ ಟೆಲ್ ಕನೆಕ್ಷನ್ ಮತ್ತು ನನ್ನ ತಾಯಿಯದು ಹಚ್ ಎಂದು, ಏರ್ ಟೆಲ್ ಉತ್ತಮ , ಹಚ್ ಉತ್ತಮ ಎಂದು ಸದ ಕಿತ್ತಾಡುತ್ತಾರೆಂದು, ಅವರನ್ನು ಸಮಾಧಾನ ಪಡಿಸಲು ಎರಡು ಮೊಬೈಲ್ ಬಳಸುತ್ತೇನೆಂದು ವಿವರಿಸಿದೆ. ಅಲ್ಲದೆ ತಾಯಿಗೆ ಫೋನ್ ಮಾಡುವಾಗ ಹಚ್ ನಿಂದ, ಹೆಂಡತಿಗೆ ಏರ್ ಟೆಲ್ ನಿಂದ ಮಾಡಿದರೆ ಹಣುವು ಉಳಿತಾಯವಾಗುತ್ತೆಂದು ಹೇಳಿದ. ಇನ್ನೆರಡು ಮೊಬೈಲ್ ಏಕೆಂದು ವಿಚಾರಿಸಲು ಒಂದು ಆಪೀಸ್ ಸಂಭಂದಿತ ವ್ಯವಹಾರಗಳಿಗೆಂದು, ಇನ್ನೊಂದು ಎಸ್ಟಿಡಿ ಮತ್ತು ಐಎಸ್‍ಡಿ ಕರೆಗಳನ್ನು ಮಾಡಲೇಂದು. ಹೇಳಿದ. ಎಲ್ಲರನ್ನೂ ಒಂದಲ್ಲ ಒಂದು ರೀತಿ ಮೂರ್ಖರನ್ನಗಿಸಿರುವ ಮೊಬೈಲ್ ಕಂಪನಿಗಳ ಚಾಲಾಕಿ ತನಕ್ಕೆ ಮೆಚ್ಚಲೇಬೇಕು.